ಡಿಎ ಹೆಚ್ಚಳದ ಜಾಕ್‌ಪಾಟ್: ದೀಪಾವಳಿಗೂ ಮುನ್ನ ಬಂಪರ್ ಗಿಫ್ಟ್.!

By koushikgk

Published on:

DA hike to 58%: ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ಮಹತ್‌ವದ ಉಡುಗೊರೆಯನ್ನು ನೀಡುವ ಸಾಧ್ಯತೆ ಇದೆ.

WhatsApp Group Join Now
Telegram Group Join Now
Instagram Group Join Now

ಇದಕ್ಕಾಗಿ ಒಂದು ಕಡೆ ತುಟ್ಟಿಭತ್ಯೆ (DA) ಹೆಚ್ಚಿಸಲು ಸಿದ್ಧತೆಗಳು ಸಾಗುತ್ತಿದ್ರೆ, ಮತ್ತೊಂದೆಡೆ ಪ್ರಧಾನಿ ನರೆಂದ್ರ ಮೋದಿ ಅವರು ದೀಪಾವಳಿಗೂ ಮುನ್ನ ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತರುವ ಬಗ್ಗೆ ಮಾತನಾಡಿದ್ದಾರೆ. ಇದರ ಪ್ರಯೋಜನವು ಸಾರ್ವಜನಿಕರು, ವ್ಯಾಪಾರಿಗಳು ಮತ್ತು ವಿಶೇಷವಾಗಿ ಸರ್ಕಾರಿ ನೌಕರರಿಗೆ ನೇರವಾಗಿ ಲಭ್ಯವಾಗಲಿದೆ.

ಮಾರ್ಚ್ 2025ರಲ್ಲಿ ಕೇಂದ್ರ ಸಚಿವ ಸಂಪುಟವು 48 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಹಾಗೂ 66 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ 2% ಡಿಎ/ಡಿಆರ್ ಹೆಚ್ಚಳವನ್ನು ಅನುಮೋದಿಸಿತು. ಇದು ಜನವರಿ 2025ರಿಂದ ಜಾರಿಗೆ ಬಂದಿದ್ದು, ಇದೀಗ ನೌಕರರು ಮತ್ತು ಪಿಂಚಣಿದಾರರು 55% ದರದಲ್ಲಿ DA ಮತ್ತು DR ಪಡೆಯುತ್ತಿದ್ದಾರೆ.

7ನೇ ವೇತನ ಆಯೋಗದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ₹18,000 ಆಗಿದ್ದು, ಪಿಂಚಣಿದಾರರ ಕನಿಷ್ಠ ಪಿಂಚಣಿ ₹9,000. ಪ್ರಸ್ತುತ 55% ಡಿಎ ಇರುವುದರಿಂದ, ಒಬ್ಬ ಉದ್ಯೋಗಿಗೆ ₹27,900 ಹಾಗೂ ಪಿಂಚಣಿದಾರರಿಗೆ ₹13,950 ವರೆಗೆ ಹಣ ದೊರೆಯುತ್ತದೆ.

ಸರ್ಕಾರ ಪ್ರತಿ ವರ್ಷ ಎರಡು ಬಾರಿ ಡಿಎ ಹೆಚ್ಚಳವನ್ನು ಜಾರಿಗೊಳಿಸುತ್ತದೆ — ಒಂದು ಬಾರಿ ಜನವರಿಯಲ್ಲಿ ಹಾಗೂ ಮತ್ತೊಂದು ಬಾರಿ ಜುಲೈನಲ್ಲಿ. ಈಗ ಜುಲೈ 2025ರ ಹೆಚ್ಚಳವನ್ನು ಸೆಪ್ಟೆಂಬರ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ.

ಲಭ್ಯವಿರುವ ವರದಿಗಳ ಪ್ರಕಾರ, ಈ ಬಾರಿ ಡಿಎ 3% ಹೆಚ್ಚಾಗಬಹುದೆಂಬ ನಿರೀಕ್ಷೆಯಿದೆ. ಈ ಪ್ರಕರಣದಲ್ಲಿ, ಡಿಎ ಶೇಕಡಾ 58ಕ್ಕೆ ಏರಬಹುದು. ಇದನ್ನು ದೀಪಾವಳಿ ಸಂದರ್ಭದಲ್ಲಿ ಜಾರಿಗೆ ತರುವ ಸಾಧ್ಯತೆ ಇದೆ. ಜೊತೆಗೆ ಜಿಎಸ್‌ಟಿ ಸುಧಾರಣೆಗಳ ಉಡುಗೊರೆಯನ್ನೂ ಸರ್ಕಾರ ನೀಡುವ ಸಾಧ್ಯತೆಯಿದೆ.

ಜನವರಿ 2025ರಲ್ಲಿ ಕೇಂದ್ರ ಸರ್ಕಾರ 8ನೇ ವೇತನ ಆಯೋಗವನ್ನು ಅನುಮೋದಿಸಿದ್ದರೂ, ಅದರ ಅಧಿಕೃತ ಅಧಿಸೂಚನೆ ಇನ್ನೂ ಹೊರಡಬೇಕಿದೆ. ಸಕಾಲದಲ್ಲಿ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಸಂಸತ್ತಲ್ಲಿ ಹೇಳಿದ್ದಾರೆ. ಇದರಿಂದ ಮುಂದೆ ನೌಕರರು ಮತ್ತು ಪಿಂಚಣಿದಾರರ ವೇತನಗಳಲ್ಲಿ ಮತ್ತಷ್ಟು ಸುಧಾರಣೆಗಳ ನಿರೀಕ್ಷೆ ಇರಬಹುದು.

READ MORE: ಸೈಬರ್ ವಂಚನೆ ಹೆಚ್ಚಳ: EPFO ಪಿಎಫ್ ಸದಸ್ಯರಿಗೆ ಎಚ್ಚರಿಕೆ

koushikgk

Leave a Comment