EPFO News: ಪಿಎಫ್ ಕ್ಲೈಮ್ ತಿರಸ್ಕಾರಕ್ಕೆ ಪ್ರಮುಖ ಕಾರಣಗಳು

By koushikgk

Published on:

EPFO News: ವೃತ್ತಿಪರರು ಪ್ರತಿ ತಿಂಗಳು ತಮ್ಮ ವೇತನದ ಒಂದು ಭಾಗವನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಯಲ್ಲಿ ಜಮಾ ಮಾಡುತ್ತಾರೆ. ನಿವೃತ್ತಿಯ ಬಳಿಕ ಪಿಎಫ್‌ನಿಂದ ಹಣವನ್ನು ಹಿಂಪಡೆಯಬಹುದಾಗಿದೆ. ಇದು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ಪಿಎಫ್ ಹಣಕ್ಕಾಗಿ ಅರ್ಜಿ ಸಲ್ಲಿಸಿದರೂ ಅದು ತಿರಸ್ಕೃತಗೊಳ್ಳುತ್ತದೆ. ಇದಕ್ಕೆ ಪಿಎಫ್ ಕ್ಲೈಮ್ ಮಾಡುವಾಗ ನಡೆಯುವ ಸಣ್ಣ ತಪ್ಪುಗಳೇ ಪ್ರಮುಖ ಕಾರಣವಾಗಿವೆ.

WhatsApp Group Join Now
Telegram Group Join Now
Instagram Group Join Now

1. ಪಿಎಫ್ ಕ್ಲೈಮ್ ಪದೇ ಪದೇ ರಿಜೆಕ್ಟ್ ಆಗುವ ಪ್ರಕರಣಗಳು

ಜೀವಮಾನವಿಡೀ ದುಡಿಯುವ ಸಂದರ್ಭದಲ್ಲಿ ಇಪಿಎಫ್ಒದಲ್ಲಿ ಕೂಡಿಟ್ಟ ಹಣವನ್ನು ನಿವೃತ್ತಿಯ ಬಳಿಕ ಹಿಂಪಡೆಯಬಹುದು. ಆದರೆ, ನಮ್ಮದೇ ಹಣವಾದರೂ ಪದೇ ಪದೇ ಪಿಎಫ್ ಕ್ಲೈಮ್ ರಿಜೆಕ್ಟ್ ಆಗುತ್ತಿರುವ ನಿದರ್ಶನಗಳು ಇವೆ. ಲಭ್ಯವಿರುವ ಮಾಹಿತಿಯ ಪ್ರಕಾರ, 2023-24 ನೇ ವಿತ್ತೀಯ ವರ್ಷದಲ್ಲಿ ಪ್ರತಿ ನಾಲ್ಕು ಪಿಎಫ್ ಕ್ಲೈಮ್‌ಗಳಲ್ಲಿ ಒಂದನ್ನು ಇಪಿಎಫ್ಒ ತಿರಸ್ಕರಿಸಿದೆ. ಇದಕ್ಕೆ ಪಿಎಫ್ ಕ್ಲೈಮ್ ಮಾಡುವಾಗ ನಡೆಯುವ ಐದು ಪ್ರಮುಖ ತಪ್ಪುಗಳು ಕಾರಣ.

2. ವೈಯಕ್ತಿಕ ಮಾಹಿತಿಯಲ್ಲಿ ವ್ಯತ್ಯಾಸ

ನಿಮ್ಮ ಹೆಸರು ಅಥವಾ ಜನ್ಮ ದಿನಾಂಕದಂತಹ ಮಾಹಿತಿಯಲ್ಲಿ ಸಣ್ಣ ವ್ಯತ್ಯಾಸ ಕಂಡು ಬಂದರೂ ಪಿಎಫ್ ಕ್ಲೈಮ್ ರಿಜೆಕ್ಟ್ ಆಗುತ್ತದೆ. ಹಾಗಾಗಿ ಅರ್ಜಿ ಸಲ್ಲಿಸುವಾಗ ಹೆಸರು, ಜನ್ಮ ದಿನಾಂಕ, ಕೆಲಸದ ಆರಂಭದ ದಿನ ಮತ್ತು ಕೊನೆಯ ದಿನಗಳನ್ನು ಸರಿಯಾಗಿ ಭರ್ತಿ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು.

3. ಆಧಾರ್–ಯುಎಎನ್ ಲಿಂಕ್ ಮಾಡದಿದ್ದರೆ

ನಿಮ್ಮ ಆಧಾರ್ ಕಾರ್ಡ್ ಯುಎಎನ್ (ಯೂನಿವರ್ಸಲ್ ಅಕೌಂಟ್ ನಂಬರ್) ಗೆ ಲಿಂಕ್ ಆಗಿರದಿದ್ದರೆ ಕ್ಲೈಮ್ ತಿರಸ್ಕೃತಗೊಳ್ಳಬಹುದು. ಇಪಿಎಫ್ಒ ಪೋರ್ಟಲ್‌ನಲ್ಲಿ KYC ಅನುಮೋದನೆಯಾಗಿದೆ ಎಂದು ತೋರಿದರೂ ಇತರೆಡೆ ಅದು Undefined ಎಂದು ತೋರಿಸಬಹುದು. ಆದ್ದರಿಂದ ಪಿಎಫ್ ಕ್ಲೈಮ್ ಸಲ್ಲಿಸುವ ಮೊದಲು ಆಧಾರ್ ಮತ್ತು ಯುಎಎನ್ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.

4. ಡಬಲ್ ಯುಎಎನ್ ರಚನೆ

ಒಂದು ಕಂಪನಿಯನ್ನು ಬಿಟ್ಟು ಮತ್ತೊಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದಾಗ ಹಳೆಯ ಯುಎಎನ್ ಅನ್ನು ಬಳಸದೆ ಹೊಸ ಯುಎಎನ್ ರಚಿಸುವ ತಪ್ಪನ್ನು ಅನೇಕರು ಮಾಡುತ್ತಾರೆ. ಇದರಿಂದ ಪಿಎಫ್ ಕ್ಲೈಮ್ ಸಮಸ್ಯೆ ಎದುರಾಗುತ್ತದೆ. ಒಂದು ಯುಎಎನ್ ನ್ನೇ ನಿರಂತರವಾಗಿ ಬಳಸುವುದು ಉತ್ತಮ.

5. ಬ್ಯಾಂಕ್ ವಿವರ ಮತ್ತು ಉದ್ಯೋಗದಾತರ ಹೆಸರು ತಪ್ಪು

ಅರ್ಜಿ ಭರ್ತಿ ಮಾಡುವಾಗ ಬ್ಯಾಂಕ್ ಖಾತೆ ಸಂಖ್ಯೆ ತಪ್ಪಾಗಿ ನಮೂದಿಸುವುದು ಅಥವಾ ಉದ್ಯೋಗದಾತರ ಸರಿಯಾದ ಹೆಸರನ್ನು ನೀಡದಿರುವುದು ಸಾಮಾನ್ಯ. ಇಂತಹ ಸಣ್ಣ ತಪ್ಪುಗಳಿಂದಲೂ ಪಿಎಫ್ ಕ್ಲೈಮ್ ತಿರಸ್ಕೃತಗೊಳ್ಳುತ್ತದೆ.

6. ಸಂಬಂಧ ವಿವರ ತಪ್ಪು

ಅರ್ಜಿ ಸಲ್ಲಿಸುವಾಗ ತಂದೆ, ತಾಯಿ, ಗಂಡ/ಹೆಂಡತಿ ಹೆಸರುಗಳ ಮುಂದೆ ಸಂಬಂಧವನ್ನು ತಪ್ಪಾಗಿ ನಮೂದಿಸಿದರೂ ಪಿಎಫ್ ಕ್ಲೈಮ್ ತಿರಸ್ಕೃತಗೊಳ್ಳಬಹುದು. ಆದ್ದರಿಂದ ಪಿಎಫ್ ಕ್ಲೈಮ್ ಅರ್ಜಿ ಸಲ್ಲಿಸುವಾಗ ಈ ಎಲ್ಲಾ ವಿವರಗಳಲ್ಲಿ ಜಾಗ್ರತೆ ಅಗತ್ಯ.

ಸರಿಯಾದ ಮಾಹಿತಿ ನೀಡುವುದು ಮತ್ತು ಮೇಲಿನ ತಪ್ಪುಗಳನ್ನು ತಪ್ಪಿಸುವುದು ಪಿಎಫ್ ಕ್ಲೈಮ್ ಸುಗಮವಾಗಿ ಅಂಗೀಕರಿಸಲು ಸಹಾಯ ಮಾಡುತ್ತದೆ.

READ MORE: ಡಿಎ ಹೆಚ್ಚಳದ ಜಾಕ್‌ಪಾಟ್: ದೀಪಾವಳಿಗೂ ಮುನ್ನ ಬಂಪರ್ ಗಿಫ್ಟ್.!

koushikgk

Leave a Comment