ಮಹಿಳೆಯರೇ ನಿಮ್ಮ ಕನಸು ನನಸಾಗಿಸಲು ಸಾಲ ಬೇಕಾ? ಇಲ್ಲಿದೆ 5 ಸರ್ಕಾರಿ ಯೋಜನೆಗಳು

By koushikgk

Published on:

ಮಹಿಳೆಯರಿಗೆ ಸರ್ಕಾರಿ ಸಾಲ ಯೋಜನೆಗಳು

Loans For Women:ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಈ ಯೋಜನೆಗಳು ಮಹಿಳೆಯರು ತಮ್ಮ ವ್ಯವಹಾರ, ಉದ್ದಿಮೆಗಳನ್ನು ಆರಂಭ ಮಾಡಲು, ವಿಸ್ತರಣೆ ಮಾಡಲು ಹಾಗೂ ಸಲಕರಣೆಗಳನ್ನು ಖರೀದಿಸಲು ಸಹಾಯ ಮಾಡುತ್ತವೆ.

WhatsApp Group Join Now
Telegram Group Join Now
Instagram Group Join Now

ಮಹಿಳೆಯರಿಗೆ ಸರ್ಕಾರಿ ಸಾಲ ಯೋಜನೆಗಳು

ಈ ಸರ್ಕಾರಿ ಯೋಜನೆಗಳ ಮೂಲಕ ಸಾಲ ಪಡೆಯಲು ಮಹಿಳೆಯರಿಗೆ ಸರಳ ದಾಖಲಾತಿ ಅಗತ್ಯವಿರುತ್ತದೆ, ಇದರಲ್ಲಿ ಕಡಿಮೆ ಬಡ್ಡಿದರಗಳು ಇರುತ್ತವೆ ಮತ್ತು ಮರುಪಾವತಿ ನಿಯಮಗಳು ಸಹಾ ಅನುಕೂಲಕರವಾಗಿರುತ್ತವೆ. ಮಹಿಳೆಯರ ಆರ್ಥಿಕ ಪ್ರಗತಿಗೆ ಮತ್ತು ಸ್ವಾವಲಂಬಿಯಾಗಿ ಮಾಡಲು ಸಾಲ ನೀಡುವ ಐದು ಜನಪ್ರಿಯ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಇಲ್ಲಿದೆ.

ಮಹಿಳೆಯರಿಗೆ ಸರ್ಕಾರಿ ಸಾಲ ಯೋಜನೆಗಳು
ಮಹಿಳೆಯರಿಗೆ ಸರ್ಕಾರಿ ಸಾಲ ಯೋಜನೆಗಳು

ಮಹಿಳೆಯರಿಗಾಗಿ ಮುದ್ರಾ ಸಾಲಗಳು :

ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ಮಹಿಳೆಯರು ತಮ್ಮ ವ್ಯವಹಾರಗಳಿಗೆ ಸುಲಭವಾಗಿ ಸಾಲವನ್ನು ಪಡೆಯಬಹುದಾಗಿದೆ. ಇದು ಮಹಿಳಾ ಉದ್ಯಮಿಗಳು, ಸ್ವಯಂ ಉದ್ಯೋಗಿಗಳು ಮತ್ತು ಸಣ್ಣ ವ್ಯಾಪಾರಸ್ಥರಿಗೆ ಆರ್ಥಿಕ ನೆರವನ್ನು ಒದಗಿಸುತ್ತದೆ.

ಮುದ್ರಾ ಸಾಲಗಳು ಮೂರು ವಿಭಾಗಗಳಲ್ಲಿ ಲಭ್ಯವಿದೆ: ಶಿಶು (₹50,000 ವರೆಗೆ), ಕಿಶೋರ (₹50,000 ರಿಂದ ₹5 ಲಕ್ಷದವರೆಗೆ) ಮತ್ತು ತರುಣ (₹5 ಲಕ್ಷದಿಂದ ₹10 ಲಕ್ಷದವರೆಗೆ). ಬ್ಯೂಟಿ ಸಲೂನ್‌ಗಳು, ಆಹಾರ ಸಂಸ್ಕರಣಾ ಘಟಕಗಳು ಮತ್ತು ಕರಕುಶಲ ಉದ್ಯಮಗಳಂತಹ ವ್ಯಾಪಾರಗಳಿಗೆ ಈ ಯೋಜನೆಯಡಿ ಸಾಲವನ್ನು ಪಡೆಯಬಹುದಾಗಿದೆ.

ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆ:

ಈ ಯೋಜನೆಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಅಲ್ಪಸಂಖ್ಯಾತ ವರ್ಗಗಳ ಮಹಿಳಾ ಉದ್ಯಮಿಗಳಿಗೆ ಅಗತ್ಯ ಇರುವ ಬೆಂಬಲವನ್ನು ನೀಡುತ್ತದೆ. ಈ ಯೋಜನೆಯಡಿ, ಉತ್ಪಾದನೆ, ವ್ಯಾಪಾರ ಮತ್ತು ಸೇವಾ ಆಧಾರಿತ ಉದ್ಯಮಗಳನ್ನು ಸ್ಥಾಪಿಸುವುದಕ್ಕೆ ₹10 ಲಕ್ಷದಿಂದ ₹1 ಕೋಟಿವರೆಗೆ ಸಾಲ ಪಡೆಯಬಹುದು. ಸಂಸ್ಥೆಯು ಕನಿಷ್ಠ 51% ರಷ್ಟು ಮಹಿಳೆಯರ ಒಡೆತನದಲ್ಲಿರಬೇಕಾಗುತ್ತದೆ.‌

ಮಹಿಳಾ ಉದ್ಯಮ ನಿಧಿ ಯೋಜನೆ :

ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) ಆರಂಭಿಸಿರುವ ಮಹಿಳಾ ಉದ್ಯಮ ನಿಧಿ ಯೋಜನೆಯು ಮಹಿಳೆಯರ ಮಾಲೀಕತ್ವದ ವ್ಯಾಪಾರಗಳಿಗೆ ಆರ್ಥಿಕ ನೆರವನ್ನು ಒದಗಿಸುತ್ತದೆ. ಹೊಸ ಉದ್ಯಮವನ್ನು ಸ್ಥಾಪನೆ ಮಾಡಲು ಅಥವಾ ಈಗಿರುವ ಉದ್ಯಮವನ್ನು ವಿಸ್ತರಿಸಲು ಈ ಯೋಜನೆಯಡಿ ₹10 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ. ಇದು ಉತ್ಪಾದನೆ, ಚಿಲ್ಲರೆ ವ್ಯಾಪಾರ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಂತಹ ಕ್ಷೇತ್ರಗಳಿಗೆ ಲಭ್ಯವಿದೆ.

ಉದ್ಯೋಗಿನಿ ಯೋಜನೆ :

ಈ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಗಳ ಮಹಿಳಾ ಉದ್ಯಮಿಗಳಿಗೆ ಸಾಲ ಸೌಲಭ್ಯ ನೀಡುತ್ತದೆ. ಕೃಷಿ, ವ್ಯಾಪಾರ ಮತ್ತು ಉತ್ಪಾದನೆಯಂತಹ ಸಣ್ಣ ವ್ಯವಹಾರಗಳ ಮೂಲಕ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಗೆ ಅರ್ಹತೆ ಪಡೆಯಲು, ಮಹಿಳೆಯರ ಕುಟುಂಬದ ವಾರ್ಷಿಕ ಆದಾಯ ₹1.5 ಲಕ್ಷ ಮೀರಿರಬಾರದು. ಈ ಯೋಜನೆಯಡಿ ₹3 ಲಕ್ಷದವರೆಗೆ ಸಾಲ ಪಡೆಯಲು ಅವಕಾಶವಿದೆ.

ಅನ್ನಪೂರ್ಣ ಯೋಜನೆ :

ನೀವು ಫುಡ್ ಕ್ಯಾಟರಿಂಗ್ ಬ್ಯುಸಿನೆಸ್ ಪ್ರಾರಂಭ ಮಾಡೋದಕ್ಕೆ ಆಲೋಚನೆ ಮಾಡುತ್ತಿದ್ದರೆ ಅಥವಾ ಈಗಾಗಲೇ ಈ ವ್ಯಾಪಾರ ಮಾಡುತ್ತಿದ್ದಲ್ಲಿ ನೀವು ಅನ್ನಪೂರ್ಣ ಯೋಜನೆಯಡಿ ಸಾಲವನ್ನು ಪಡೆಯಬಹುದು. ಎಸ್‌ಬಿಐ (SBI) ಬೆಂಬಲಿತ ಈ ಯೋಜನೆಯು ಆಹಾರ ಉದ್ಯಮದಲ್ಲಿರುವ ಮಹಿಳಾ ಉದ್ಯಮಿಗಳಿಗೆ ಅಡುಗೆ ಸಲಕರಣೆಗಳು, ಪಾತ್ರೆಗಳು ಮತ್ತು ಕಚ್ಚಾ ವಸ್ತುಗಳ ಖರೀದಿಗಾಗಿ ಸಾಲ ಪಡೆಯುವುದಕ್ಕೆ ನೆರವು ನೀಡುತ್ತದೆ. ಈ ಯೋಜನೆಯಡಿ ಗರಿಷ್ಠ ₹50,000 ವರೆಗೆ ಸಾಲವನ್ನು ಪಡೆಯಬಹುದು

SIP : ಮ್ಯೂಚುವಲ್ ಫಂಡ್ ಗಳ ಮ್ಯಾಜಿಕ್ – ಮಾಸಿಕ ₹10,000 ಉಳಿತಾಯಕ್ಕೆ ₹11 ಲಕ್ಷ ರಿಟರ್ನ್ಸ್

koushikgk

Leave a Comment