5 ವರ್ಷಗಳಲ್ಲಿ 35 ಲಕ್ಷ ಗಳಿಸಿ: ಪೋಸ್ಟ್ ಆಫೀಸ್ ನ ಈ ಅದ್ಭುತ ಸ್ಕೀಮ್ ಬಗ್ಗೆ ತಿಳಿಯಿರಿ

By koushikgk

Published on:

post office rd

Post Office RD:ನಿಮ್ಮ ಉಳಿತಾಯವನ್ನು ಸುರಕ್ಷಿತವಾಗಿ ಮತ್ತು ನಿಶ್ಚಿಂತೆಯಿಂದ ಹೂಡಿಕೆ ಮಾಡುವ ಆಲೋಚನೆಯನ್ನು ಮಾಡುತ್ತಿರುವಿರಾ? ಹಾಗಾದರೆ ಅಂಚೆ ಕಚೇರಿಯ ಆವರ್ತಕ ಠೇವಣಿ (RD) ಯೋಜನೆಯು ನಿಮಗೆ ಅತ್ಯುತ್ತಮ ಆಯ್ಕೆಯಾಗಬಲ್ಲದೆಂದು ನಿಮಗೆ ಗೊತ್ತೇನು? ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಭವಿಷ್ಯದಲ್ಲಿ ಗಣನೀಯ ಮೊತ್ತವನ್ನು ಗಳಿಸಲು ಅವಕಾಶವಿದೆ. ಮಾರುಕಟ್ಟೆ ಅಪಾಯಗಳಿಂದ ದೂರವಿರುವ ಅಂಚೆ ಕಚೇರಿ ಯೋಜನೆಗಳು ನಿಮ್ಮ ಹಣಕ್ಕೆ ಭದ್ರತೆಯನ್ನು ಒದಗಿಸುತ್ತವೆ.

WhatsApp Group Join Now
Telegram Group Join Now
Instagram Group Join Now

ಈ ಆರ್‌ ಡಿ ಯೋಜನೆಯು ಐದು ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ಇದು ಹೆಚ್ಚು ಸಮಯವಲ್ಲದಿದ್ದರೂ, ನಿಮ್ಮ ಸಣ್ಣ ಹೂಡಿಕೆಗಳು ಸೇರಿ ಐದು ವರ್ಷಗಳ ನಂತರ ಒಂದು ಉತ್ತಮ ಮೊತ್ತ ನಿಮ್ಮ ಕೈಯನ್ನು ಖಂಡಿತವಾಗಿ ಸೇರುತ್ತದೆ. ಸಣ್ಣ ಹೂಡಿಕೆಗಳಿಂದ ದೊಡ್ಡ ಬಂಡವಾಳವನ್ನು ಸೃಷ್ಟಿಸಲು ಇದು ಬಹಳ ವಿಶ್ವಾಸಾರ್ಹ ಮತ್ತು ಖಾತರಿಯ ಆದಾಯ ನೀಡುವ ಯೋಜನೆಯಾಗಿದೆ.

ಈ ಯೋಜನೆಯಲ್ಲಿ ಹೂಡಿಕೆ ಮಾಡುವ ವಿಧಾನ ಸಹಾ ಬಹಳ ಸರಳವಾಗಿದೆ. ಐದು ವರ್ಷಗಳಲ್ಲಿ ನಿಮಗೆ ಎಷ್ಟು ಆದಾಯ ಸಿಗುತ್ತದೆ ಎನ್ನುವ ಸವಿವರವಾಗ ಮಾಹಿತಿಯನ್ನು ನೀವು ಅಂಚೆ ಕಚೇರಿಯಲ್ಲಿ ಪಡೆಯಬಹುದಾಗಿದೆ. ನಿಮ್ಮ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಇದೊಂದು ಉತ್ತಮ ಮಾರ್ಗವಾಗಿದೆ.

ಅಂಚೆ ಕಚೇರಿಯ ಆವರ್ತಕ ಠೇವಣಿ (RD) ಯೋಜನೆಯು ಐದು ವರ್ಷಗಳ ಅವಧಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ಹೂಡಿಕೆದಾರರು ತಮ್ಮ ಹಣಕ್ಕೆ ಸ್ಥಿರ ಬಡ್ಡಿ ದರದಲ್ಲಿ ಲಾಭವನ್ನು ಪಡೆಯುತ್ತಾರೆ. ಯಾವುದೇ ಮಾರುಕಟ್ಟೆ ಅಪಾಯಗಳಿಲ್ಲದೆ ನಿಮ್ಮ ಉಳಿತಾಯವನ್ನು ಹೂಡಿಕೆ ಮಾಡಲು ನೀವು ಬಯಸುವುದೇ ಆದರೆ, ಈ ಯೋಜನೆಯು ಅತ್ಯುತ್ತಮ ಆಯ್ಕೆಯಾಗಿದೆ.

ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ತೊಡಗಬಹುದು. ಉಳಿತಾಯ ಮಾಡುವ ಅಭ್ಯಾಸವು ನಿಮ್ಮ ಭವಿಷ್ಯವನ್ನು ಆರ್ಥಿಕವಾಗಿ ಇನ್ನಷ್ಟು ಬಲಪಡಿಸುತ್ತದೆ. ಆದರೆ, 5 ವರ್ಷಗಳ ನಂತರ ಬಡ್ಡಿ ಪಡೆಯುವ ಮೊತ್ತವನ್ನು ನಿಖರವಾಗಿ ತಿಳಿಯಲು, ನಿಮ್ಮ ಹೂಡಿಕೆಯ ಮೊತ್ತ ಮತ್ತು ಅದಕ್ಕೆ ಅನ್ವಯವಾಗುವ ಬಡ್ಡಿದರದ ಪರಿಶೀಲನೆಯನ್ನು ಅವಲಂಬಿಸಿರುತ್ತದೆ.

ಇದರಲ್ಲಿ ಯಾರು ಹೂಡಿಕೆ ಮಾಡಬಹುದು?

post office rd
post office rd

ಈ ಆರ್ ಡಿ ಯೋಜನೆ ಕೇವಲ 100 ರೂ. ಮಾಸಿಕ ಉಳಿತಾಯದಿಂದಲೇ ಆರಂಭ ಮಾಡಬಹುದು. ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಬಹುದಾಗಿರುತ್ತೆ. ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಲೇಬೇಕೆಂಬ ಕಡ್ಡಾಯ ನಿಯಮಗಳಿಲ್ಲ. ಮಾಸಿಕ ಸಂಬಳ ಪಡೆಯುವವರು, ಗೃಹಿಣಿಯರು, ಸಣ್ಣ ವ್ಯಾಪಾರಿಗಳು ಸೇರಿದಂತೆ ಮಧ್ಯಮ ವರ್ಗದ ಜನರಿಗೆ ಹಣ ಉಳಿತಾಯ ಮಾಡಲು ಇದು ಇದು ಅತ್ಯಂತ ಸೂಕ್ತವಾದ ಯೋಜನೆಯಾಗಿದೆ.

ಆರ್ಡಿ ಖಾತೆಯನ್ನು ತೆರೆದ ದಿನವೇ ನೀವು ಮೊದಲ ಕಂತಿನ ಹಣವನ್ನು ಪಾವತಿಸಬೇಕು. ನೀವು ತಿಂಗಳ 16ನೇ ತಾರೀಖಿನ ಮೊದಲು ಖಾತೆಯನ್ನು ತೆರೆದಿದ್ದರೆ, ಮುಂದಿನ ಎಲ್ಲಾ ಕಂತುಗಳನ್ನು ಪ್ರತಿ ತಿಂಗಳ 15ನೇ ತಾರೀಖಿನೊಳಗೆ ಠೇವಣಿ ಇಡಬೇಕು. ಒಂದು ವೇಳೆ 16ನೇ ತಾರೀಖಿನ ನಂತರ ಖಾತೆ ತೆರೆದರೆ, ನೀವು ಪ್ರತಿ ತಿಂಗಳು 16ನೇ ತಾರೀಖಿನಿಂದ ಆ ತಿಂಗಳ ಕೊನೆಯ ಕೆಲಸದ ದಿನದವರೆಗೆ ಹಣವನ್ನು ಪಾವತಿಸಿ ಠೇವಣಿ ಇಡಬಹುದು. ಅಷ್ಟೇ ಅಲ್ಲದೆ, ಈ ಯೋಜನೆಯಲ್ಲಿ ಹೂಡಿಕೆದಾರರು ತಮ್ಮ ಠೇವಣಿ ಮೊತ್ತದ ಶೇಕಡಾ 50ರಷ್ಟು ಮೊತ್ತವನ್ನು ಸಾಲವಾಗಿಯೂ ಪಡೆಯಬಹುದು.

BPL Ration Card : ಬಿಪಿಎಲ್ ಪಡಿತರ ಕಾರ್ಡ್ ದಾರರಿಗೆ ಸರ್ಕಾರದ ವತಿಯಿಂದ ಸಿಕ್ಕಿದೆ ಭರ್ಜರಿ ಶುಭಸುದ್ದಿ

koushikgk

Leave a Comment