SIP (ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಮ್ಯೂಚುಯಲ್ ಫಂಡ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡುವುದು ಹಣವನ್ನು ಬುದ್ಧಿವಂತಿಕೆಯಿಂದ ಬೆಳೆಸಲು ಉತ್ತಮ ಮಾರ್ಗವಾಗಿದೆ ಎಂದು ಹಣಕಾಸು ತಜ್ಞರು ಸಲಹೆ ಸೂಚನೆ ನೀಡುತ್ತಾರೆ. ಮಾರುಕಟ್ಟೆಯ ಏರಿಳಿತಗಳಿದ್ದರೂ, ನಿರಂತರವಾಗಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ಗಣನೀಯವಾಗಿ ಲಾಭವನ್ನು ಗಳಿಸಬಹುದಾಗಿದೆ.
ಕಳೆದ ಐದು ವರ್ಷಗಳಲ್ಲಿ ಕೆಲವು ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳು SIP ಹೂಡಿಕೆಗಳ ಮೇಲೆ 25% ಕ್ಕಿಂತ ಹೆಚ್ಚು XIRR (ವಿಸ್ತರಿತ ಆಂತರಿಕ ಆದಾಯದ ದರ) ಆದಾಯವನ್ನು ನೀಡಿವೆ. ಇದರರ್ಥ, ನೀವು ತಿಂಗಳಿಗೆ ₹10,000 SIP ಮಾಡದಿದ್ದರೆ, ಈಗ ನಿಮ್ಮ ಹೂಡಿಕೆ ₹11 ಲಕ್ಷಕ್ಕೂ ಹೆಚ್ಚು ಇರುತ್ತದೆ. ಒಟ್ಟು 15 ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳು ಅತ್ಯುತ್ತಮ ಆದಾಯವನ್ನು ನೀಡಿವೆ. ಇಲ್ಲಿದೆ ಅವುಗಳ ವಿವರ..
ಮೋತಿಲಾಲ್ ಓಸ್ವಾಲ್ ಮಿಡ್‌ಕ್ಯಾಪ್ ಫಂಡ್ : ಕಳೆದ ಐದು ವರ್ಷಗಳಲ್ಲಿ SIP ಹೂಡಿಕೆಗಳ ಮೇಲೆ ಇದು ಹೆಚ್ಚು 30.13% XIRR ಆದಾಯವನ್ನು ನೀಡಿದೆ. ತಿಂಗಳಿಗೆ ₹10,000 SIP ಮಾಡಿದ್ದರೆ, ನಿಮ್ಮ ಹೂಡಿಕೆಯ ಮೌಲ್ಯ ಈಗ ₹12.47 ಲಕ್ಷ ಆಗುತ್ತಿದೆ.
ಬಂಧನ ಸ್ಮಾಲ್ ಕ್ಯಾಪ್ ಫಂಡ್: ಈ ಫಂಡ್ 30.08% XIRR ಆದಾಯ ನೀಡಿದ್ದು, ₹10,000 SIP ಹೂಡಿಕೆಗೆ ₹12.45 ಲಕ್ಷ ಗಳಿಸಿದೆ.
ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್: ಇದು 27.81% ಆದಾಯದೊಂದಿಗೆ, ₹10,000 SIP ಹೂಡಿಕೆಯನ್ನು ₹11.81 ಲಕ್ಷಕ್ಕೆ ಹೆಚ್ಚಿಸಿದೆ.
ಇನ್ವೆಸ್ಕೋ ಇಂಡಿಯಾ ಮಿಡ್ ಕ್ಯಾಪ್ ಫಂಡ್ ಮತ್ತು ಸ್ಮಾಲ್ ಕ್ಯಾಪ್ ಫಂಡ್ಸ್: ಈ ಫಂಡ್‌ಗಳು ಕ್ರಮವಾಗಿ 27.63% ಮತ್ತು 27.42% ಆದಾಯ ನೀಡಿದ್ದು, ₹10,000 SIP ಹೂಡಿಕೆಯು ಕ್ರಮವಾಗಿ ₹11.76 ಲಕ್ಷ ಮತ್ತು ₹11.70 ಲಕ್ಷ ಆಗಿದೆ.
ನಿಪ್ಪಾನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್: ಇದು ವಾರ್ಷಿಕ 27.42% ದರದಲ್ಲಿ ₹10,000 SIP ಗೆ ₹11.70 ಲಕ್ಷಕ್ಕೆ ಪರಿವರ್ತಿಸಲಾಗಿದೆ.
ಎಚ್‌ಡಿಎಫ್‌ಸಿ ಮಿಡ್ ಕ್ಯಾಪ್ ಫಂಡ್: ಇದು ವಾರ್ಷಿಕ ಸರಾಸರಿ 26.87% ಆದಾಯ ನೀಡಿ, ₹10,000 SIP ಹೂಡಿಕೆಯನ್ನು ₹11.5 ಲಕ್ಷಕ್ಕೆ ಹೆಚ್ಚಿಸಿದೆ.

ಎಡೆಲ್‌ವೀಸ್ ಮಿಡ್ ಕ್ಯಾಪ್ ಫಂಡ್: ₹10,000 SIP ಹೂಡಿಕೆಯು ಇಲ್ಲಿ ₹11.34 ಲಕ್ಷ ಗಳಿಸಿದೆ.
ನಿಪ್ಪಾನ್ ಇಂಡಿಯಾ ಗ್ರೋಥ್ ಮಿಡ್ ಕ್ಯಾಪ್ ಫಂಡ್: ಈ ಫಂಡ್‌ನಲ್ಲಿ ₹10,000 SIP ಹೂಡಿಕೆಯು ₹11.32 ಲಕ್ಷಕ್ಕೆ ತಲುಪಿದೆ.
ಮೋತಿಲಾಲ್ ಓಸ್ವಾಲ್ ಲಾರ್ಜ್ ಅಂಡ್ ಮಿಡ್ ಕ್ಯಾಪ್ ಫಂಡ್ ಮತ್ತು ನಿಪ್ಪಾನ್ ಇಂಡಿಯಾ ಮಲ್ಟಿ ಕ್ಯಾಪ್ ಫಂಡ್ಸ್: ಈ ಫಂಡ್‌ಗಳು ₹10,000 SIP ಯನ್ನು ಕ್ರಮವಾಗಿ ₹11.31 ಲಕ್ಷ ಮತ್ತು ₹11.22 ಲಕ್ಷಕ್ಕೆ ಪರಿವರ್ತಿಸಿವೆ.
ಟಾಟಾ ಸ್ಮಾಲ್ ಕ್ಯಾಪ್ ಫಂಡ್: ಈ ಫಂಡ್‌ನಲ್ಲಿ ₹10,000 SIP ಐದು ವರ್ಷಕ್ಕೆ ₹11.21 ಲಕ್ಷ ಆಗಿದೆ.
ಎಚ್‌ಡಿಎಫ್‌ಸಿ ಸ್ಮಾಲ್ ಕ್ಯಾಪ್ ಫಂಡ್: ಈ ಫಂಡ್ ₹1.12 ಲಕ್ಷ ಆದಾಯವನ್ನು ನೀಡಿದೆ.
ಫ್ರಾಂಕ್ಲಿನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್ ಮತ್ತು ಎಚ್‌ಎಸ್‌ಬಿಸಿ ಸ್ಮಾಲ್ ಕ್ಯಾಪ್ ಫಂಡ್‌ಗಳು: ಈ ಫಂಡ್‌ಗಳು ಕ್ರಮವಾಗಿ ₹11.09 ಲಕ್ಷ ಮತ್ತು ₹11.05 ಲಕ್ಷ ಆದಾಯ ನೀಡಿವೆ.